1. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಜೀವವಿಮೆ):

  • ಕೇಂದ್ರ ಸರ್ಕಾರದಿಂದ ಪ್ರಾಯೋಜಿತವಾದ ಯೋಜನೆ.
  • ಭಾರತೀಯ ಜೀವವಿಮಾ ನಿಗಮ (LIC) ದ ಸಹಯೋಗದೊಂದಿಗೆ ನೀಡುತ್ತಿದ್ದೇವೆ.
  • ಬ್ಯಾಂಕಿನ ಎಲ್ಲಾ ಉಳಿತಾಯ ಖಾತೆದಾರರಿಗೆ ಈ ಸೌಲಭ್ಯ ಲಭ್ಯವಿರುತ್ತದೆ.
  • 18 ರಿಂದ 50 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು.
  • 55 ವರ್ಷದವರೆಗೂ ರೂ. 2.00 ಲಕ್ಷ ವಿಮಾ ರಕ್ಷಣೆ ಇರುತ್ತದೆ.
  • ವಾರ್ಷಿಕ ಪ್ರೀಮಿಯಂ ಮೊತ್ತ ಕೇವಲ ರೂ. 436/- ಆಗಿರುತ್ತದೆ.
  • ಸಹಜ ಸಾವಿಗೆ ರೂ. 2 ಲಕ್ಷದವರೆಗೆ ಜೀವವಿಮಾ ಮೊತ್ತ ದೊರೆಯುತ್ತದೆ.
  • ವರ್ಷ ಮೇ 31 ರ ಒಳಗೆ ಪ್ರೀಮಿಯಂ ಮೊತ್ತವನ್ನು ತಮ್ಮ ಉಳಿತಾಯ ಖಾತೆಯಿಂದ ನೇರವಾಗಿ ವರ್ಗಾವಣೆ (Auto Debit) ಮಾಡಿಕೊಳ್ಳಲಾಗುತ್ತದೆ.

2. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಅಪಘಾತ ವಿಮೆ):

  • ಕೇಂದ್ರ ಸರ್ಕಾರದಿಂದ ಪ್ರಾಯೋಜಿತವಾದ ಯೋಜನೆ.
  • ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿ., ನವರ ಸಹಯೋಗದೊಂದಿಗೆ ನೀಡುತ್ತಿದ್ದೇವೆ.
  • ಬ್ಯಾಂಕಿನ ಎಲ್ಲಾ ಉಳಿತಾಯ ಖಾತೆದಾರರಿಗೆ ಈ ಸೌಲಭ್ಯ ಲಭ್ಯವಿರುತ್ತದೆ.
  • 18 ರಿಂದ 70 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು.
  • ವಾರ್ಷಿಕ ಪ್ರೀಮಿಯಂ ಮೊತ್ತ ಕೇವಲ ರೂ.20/- ಆಗಿರುತ್ತದೆ.
  • ಅಪಘಾತದಲ್ಲಿ ಸಾವು ಸಂಭವಿಸಿದರೆ ವಿಮಾ ಮೊತ್ತ ರೂ. 2 ಲಕ್ಷಗಳನ್ನು ನೀಡಲಾಗುತ್ತದೆ.
  • ಅಪಘಾತದಿಂದ ಶಾಶ್ವತವಾಗಿ ಕಣ್ಣು, ಕೈ, ಕಾಲು ಕಳೆದುಕೊಂಡು ಸಂಪೂರ್ಣ ವಿಕಲಚೇತನರಾದರೂ ರೂ. 2 ಲಕ್ಷ ಪರಿಹಾರ ದೊರೆಯುತ್ತದೆ.
  • ಅಪಘಾತದಲ್ಲಿ ಒಂದು ಕಣ್ಣು, ಒಂದು ಕೈ ಇಲ್ಲವೇ ಒಂದು ಕಾಲನ್ನು ಕಳೆದುಕೊಂಡರೆ ರೂ. 1 ಲಕ್ಷದವರೆಗೆ ವಿಮಾ ಪರಿಹಾರ ಲಭ್ಯವಿದೆ.
  • ಪ್ರತಿ ವರ್ಷ ಮೇ 31 ರ ಒಳಗೆ ಪ್ರೀಮಿಯಂ ಮೊತ್ತವನ್ನು ತಮ್ಮ ಉಳಿತಾಯ ಖಾತೆಯಿಂದ ನೇರವಾಗಿ ವರ್ಗಾವಣೆ (Auto Debit) ಮಾಡಿಕೊಳ್ಳಲಾಗುತ್ತದೆ.