|
|
||||||||||||||||||||||||
ಸಂತ ಜೋಸೆಫರ ಕಾಲೇಜಿನಲ್ಲಿ ಅಧ್ಯಯನ ಮಾಡಿ ವಿಜ್ಞಾನ ಪದವಿ. 1939ರಲ್ಲಿ ಆರಂಭವಾದ ರಾಘವೇಂದ್ರ ಪ್ರಸನ್ನ ಹೋಟೆಲ್ ಮಾಲೀಕರು. ಐವತ್ತು ವರ್ಷಗಳಿಂದಲೂ ಹೋಟೆಲ್ ಉದ್ಯಮಿಯಾಗಿದ್ದಾರೆ. ದೇಶ ವಿದೇಶಗಳಲ್ಲಿ ಪ್ರವಾಸ ಕೈಗೊಂಡು ಅಪಾರ ಅನುಭವ ಸಂಪಾದಿಸಿದ್ದಾರೆ. 1970ರಲ್ಲಿ ಡಬ್ಲಿನ್ ನಲ್ಲಿ ನಡೆದ ಛೇಂಬರ್ ಆಫ್ ಕಾಮರ್ಸ್ ನ ವಿಶ್ವ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಅನುಭವ. ಸಮಾಜಮುಖಿ ಧೋರಣೆಯುಳ್ಳ ಶ್ರೀಯುತರು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ದ ಅಮೆರಿಕೆಯಲ್ಲಿ ನಡೆದ ಸಮಾವೇಶದಲ್ಲಿ, ಬೆಂಗಳೂರು ಜೇಸೀಸ್ ಪರವಾಗಿ ಪಾಲ್ಗೊಂಡ ಧುರೀಣರು. ಎಲ್ಲಕ್ಕೂ ಮಿಗಿಲಾಗಿ ಮಾನವೀಯ ಅನುಕಂಪ ಉಳ್ಳವರು. ಕರ್ನಾಟಕ ಪ್ರದೇಶ ಹೋಟೆಲ್ ಗಳ ಸಂಘದಿಂದ 2014 ರಲ್ಲಿ ಆತಿಥ್ಯರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಬ್ಯಾಂಕಿನ ನಿರ್ದೇಶಕರಾಗಿ 1994ರಲ್ಲಿ ಆಯ್ಕೆಯಾಗಿ, 1997ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಇಂದಿಗೂ ನಿರ್ದೇಶಕರಾಗಿ ಮುಂದುವರೆದಿದ್ದಾರೆ. |
|||||||||||||||||||||||||
|
|
||||||||||||||||||||||||
1977ರಿಂದಲೇ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತನ್ನದೇ ಆದ ವ್ಯವಸ್ಥೆಯ ಮೂಲಕ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಖ್ಯಾತ ಮೂಳೆರೋಗ ತಜ್ಞರು, ಶೇಖರ್ ಆಸ್ಪತ್ರೆಯ ಮಾಲೀಕರು, ಕರ್ನಾಟಕ ಹಾಗೂ ಭಾರತೀಯ ಮೂಳೆರೋಗ ತಜ್ಞರ ಸಂಘದ ಸದಸ್ಯರೂ ಆದ ಶ್ರೀಯುತರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ಬಿ.ಎಸ್ಸಿ , ಎಂ.ಬಿ.ಬಿ.ಎಸ್., ಎಂ.ಎಸ್., ಮಾಡಿರುವ ಐತಾಳರು 2008ರಲ್ಲಿ ಪ್ರತಿಷ್ಠಿತ ಬಿ.ಸಿ.ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರಮಂಡಳಿ ಅಧ್ಯಕ್ಷರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ. ಬ್ಯಾಂಕಿನ ನಿರ್ದೇಶಕರಾಗಿ 1999 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. |
|||||||||||||||||||||||||
|
|
||||||||||||||||||||||||
|
|
||||||||||||||||||||||||
ಪಾಕಶಾಸ್ತ್ರ ಪ್ರವೀಣರಾದ ಶ್ರೀಯುತರು ಶಿಕಾರಿಪುರದಲ್ಲಿ ತಮ್ಮದೇ ಆದ "ಶ್ರೀ ಸತ್ಯನಾರಾಯಣ ಭವನ" ಹೋಟೆಲ್ ಆರಂಭಿಸಿದರು. ಆದರೆ ದೀರ್ಘಕಾಲ ನಡೆಯದೆ ಇದ್ದ ಕಾರಣ ಊರಿಗೆ ಹಿಂದಿರುಗಿ ಅರ್ಚಕ ವೃತ್ತಿ ಹಿಡಿದು ಜೀವನ ನಡೆಸಿದರು. ಜತೆಗೆ ಛಲಬಿಡದ ಐತಾಳರು 1976ರಲ್ಲಿ ಬೆಂಗಳೂರಿಗೆ ಬಂದು ಬ್ಯಾಂಕ್ ಸಾಲ ಪಡೆದು "ಶ್ರೀ ಲಕ್ಷ್ಮೀವೆಂಕಟೇಶ್ವರ ಕಾಫಿ ಬಾರ್" ಮೂಲಕ ಮತ್ತೆ ಹೋಟೆಲ್ ಉದ್ಯಮಕ್ಕೆ ತೊಡಗಿದರು. ಬುಲ್ ಟೆಂಪಲ್ ರಸ್ತೆಯಲ್ಲಿನ ಇವರ ಹೋಟೆಲ್ ಗೆ ವರನಟ ಡಾ. ರಾಜ್ ಕುಮಾರ್ ಅವರು ಭೇಟಿ ನೀಡುತ್ತಿದ್ದ ಕಾರಣ ಚಿತ್ರರಂಗದ ಗಣ್ಯರೊಂದಿಗೆ ಸ್ನೇಹ ಬೆಳೆಸಿಕೊಂಡರು. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಇವರನ್ನು ಸನ್ಮಾನಿಸಿ ಗೌರವಿಸಿದೆ. 1997 ರಿಂದ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. |
|||||||||||||||||||||||||
|
|
||||||||||||||||||||||||
'ಸರ್.ಎಂ.ವಿ' ಅವರ ದೂರದರ್ಶಿತ್ವದ ಫಲಶ್ರುತಿಯಾಗಿ ಆರಂಭವಾದ ಮೈಸೂರು ಬ್ಯಾಂಕಿನಲ್ಲಿ 1967ರಲ್ಲಿ ವೃತ್ತಿ ಆರಂಭಿಸಿದ ಶ್ರೀಯುತರು ತಮ್ಮ ಸೇವಾ ನೈಪುಣ್ಯದಿಂದ, ಹಲವುಹಂತದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾ, ಅಭಿವೃದ್ಧಿ ಅಧಿಕಾರಿಯಾಗಿ, ಆಸ್ತಿ ನಿರ್ವಹಣಾ ಅಧಿಕಾರಿಯಾಗಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ 2001ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಬ್ಯಾಂಕ್ ವಲಯದಲ್ಲಿನ ತಮ್ಮ ಅನುಭವವನ್ನು ಇತರೆ ವಿತ್ತೀಯ ಸಂಸ್ಥೆಗಳಿಗೆ ವಿಸ್ತರಿಸಿ ಆರ್ಥಿಕ ಶಿಸ್ತು ತರುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಂಕಿನ ನಿರ್ದೇಶಕರಾಗಿ 2005 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. |
|||||||||||||||||||||||||
|
|
||||||||||||||||||||||||
|
|||||||||||||||||||||||||
|
|
||||||||||||||||||||||||
ಜೀವನೋಪಾಯಕ್ಕಾಗಿ ಕಾರ್ಮಿಕರಾಗಿ ದುಡಿದು ಅನುಭವ ಗಳಿಸಿ, 1978ರಿಂದ ಹೋಟೆಲ್ ಉದ್ಯಮವನ್ನು ಆರಂಭಿಸಿದರು. ದಕ್ಷಿಣ ಕನ್ನಡ ಗಾಣಿಗರ ಸಮಾಜದ ಅಧ್ಯಕ್ಷರಾಗಿ, ಸಕ್ರಿಯ ಕಾರ್ಯಕರ್ತರಾಗಿ ಸೇವೆಸಲ್ಲಿಸಿದವರು. ಕಳೆದ 15 ವರ್ಷಗಳಿಂದಲೂ ಹೋಟೆಲ್ ಮಾಲೀಕರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. 35 ವರ್ಷಗಳಿಂದ ಬಸ್ರೂರು ಕೊಳನಕೋಡು ಕಂದಾವರ ಈಶ್ವರ ದೇವಾಲಯದ ಮುಕ್ತೇಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮಶೀಲರಾಗಿ ಕಾರ್ಯೋತ್ಸಹದಲ್ಲಿ ತೊಡಗಿರುವ ಶ್ರೀಯುತರು 1997 ರಿಂದ ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರು ಕೂಡ ಆಗಿದ್ದಾರೆ. |
|||||||||||||||||||||||||
|
|
||||||||||||||||||||||||
1971ರಲ್ಲಿ ಬೆಂಗಳೂರಿಗೆ ಉದ್ಯೋಗ ಅರಸಿ ಬಂದ ಶ್ರೀಯುತರು ಹೋಟೆಲ್ ಕಾರ್ಮಿಕನಾಗಿ, 1978ರಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಸಂಘ ಸಂಸ್ಥೆಗಳಲ್ಲಿ ಉತ್ಸಾಹಿ ತರುಣನಾಗಿ ತಮ್ಮ ಸಮಾಜ ಸೇವೆಯನ್ನು ಆರಂಭಿಸಿದ ರಾಜೀವ ಶೆಟ್ಟರು, ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ, ಕನ್ನಡ ಸರ್ವೋದಯ ಸಂಘ, ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಇಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಭಾಷಾ ಪ್ರೇಮಿಯಾದ ಇವರು ದಂಡು ಪ್ರದೇಶದ ಕನ್ನಡ ಪರ ಸಂಘಟನೆಯ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ, ಕಲಾರಸಿಕರಾದ ಶ್ರೀಯುತರು ಯಕ್ಷಕಲಾ ರಂಗದ ಅಧ್ಯಕ್ಷರೂ ಹೌದು. ಬ್ಯಾಂಕಿನ ನಿರ್ದೇಶಕರ ಮಂಡಳಿಯಲ್ಲಿ 1998 ರಿಂದ ನಿರ್ದೇಶಕರಾಗಿದ್ದಾರೆ. |
|||||||||||||||||||||||||
|
|
||||||||||||||||||||||||
|
|||||||||||||||||||||||||
|
|
||||||||||||||||||||||||
ಆಧುನಿಕ ಮನೋಭಾವವನ್ನು ರೂಢಿಸಿಕೊಂಡಿರುವ ದಿಟ್ಟ ಮಹಿಳೆ. ಯಾವುದೇ ಆಘಾತವನ್ನು ಧೈರ್ಯದಿಂದ ಎದುರಿಸಲು ಕಲಿತ ನುರಿತ ಮಹಿಳೆ. ಗೃಹಕೃತ್ಯಗಳನ್ನು ನೆರವೇರಿಸುವುದರ ಜತೆಜತೆಗೆ ಸಾಮಾಜಿಕವಲಯದಲ್ಲೂ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆರ್ಥಿಕ ಸಂಸ್ಥೆಗಳಂಥ ವಲಯದಲ್ಲೂ ತಮ್ಮ ಪ್ರತಿನಿಧಿತ್ವವನ್ನು ಸಂಪಾದಿಸಿಕೊಂಡಿದ್ದಾರೆ. ನುರಿತ ನಿರ್ದೇಶಕರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1997 ರಿಂದ ಬ್ಯಾಂಕಿನ ಮಹಿಳಾ ಮೀಸಲು ಸ್ಥಾನದ ನಿರ್ದೇಶಕರಾಗಿ ಮುಂದುವರೆದಿರುತ್ತಾರೆ. |
|||||||||||||||||||||||||
|
|
||||||||||||||||||||||||
|
|||||||||||||||||||||||||
|
|
||||||||||||||||||||||||
ಲೆಕ್ಕಪತ್ರಗಳಲ್ಲಿ ನಿಪುಣರಾದ ಇವರು ಸನ್ನದು ಲೆಕ್ಕಿಗರಾಗಿ, ತಮ್ಮ ಸ್ಥಾನ ಗೌರವವನ್ನು ಪಡೆದುಕೊಂಡಿದ್ದಾರೆ. 1992ರಲ್ಲಿ ಲೆಕ್ಕ ಪರಿಶೋಧನಾ ಕಾರ್ಯಕ್ಕೆ ತೊಡಗಿಸಿಕೊಂಡ ಶ್ರೀಯುತರು 1995ರಲ್ಲಿ ಕೆ. ಮುರಳೀಧರ & ಕಂಪೆನಿ ಸಂಸ್ಥೆಯನ್ನು ಆರಂಭಿಸಿದರು. 2004ರ ವೇಳೆಗೆ ಇವರ ಕಾರ್ಯಕ್ಷಮತೆಯನ್ನು ಪರಿಗಣಿಸಿದ ರಾಷ್ಟೀಯ ಸನ್ನದು ಸಂಸ್ಥೆ ಇವರಿಗೆ ಸಂಸ್ಥೆಯ ಸದಸ್ಯ ಗೌರವವನ್ನು ನೀಡಿ ಪುರಸ್ಕರಿಸಿತು. F.C.A ಎಂದು ಮಾನ್ಯ ಮಾಡಿತು. ಸಮಾಜಮುಖಿಯಾದ ಇವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರಮಂಡಳಿ ನಿರ್ದೇಶಕರೂ ಆಗಿದ್ದರು. ಬ್ಯಾಂಕಿನ ವೃತ್ತಿಪರ ನಿರ್ದೇಶಕ ಸ್ಥಾನದಿಂದ 2005 ರಿಂದ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. |
|||||||||||||||||||||||||
|
|
||||||||||||||||||||||||
ಬೆಂಗಳೂರು ವಿಶ್ವವಿದ್ಯಾಲಯದ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಸಹಕಾರಿ ವಲಯಕ್ಕೂ ಪದಾರ್ಪಣ ಮಾಡಿದ್ದಾರೆ. ಜನರೊಂದಿಗೆ ಬೆರೆಯುವ ಗುಣದಿಂದಾಗಿ ಜನಪ್ರಿಯರಾಗಿದ್ದಾರೆ. ಸಂಘಟನೆಯಲ್ಲೂ ಮುಂಚೂಣಿಯಲ್ಲಿರುತ್ತಾರೆ. ಸಾಮಾಜಿಕ ಕಾಳಜಿ ಇರುವ ಶ್ರೀಯುತರು ತಮ್ಮ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತವಾಗಿದ್ದು, ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲದ ಶಿಕ್ಷಕೇತರ ಸಂಘದ ಕೋಶಾಧ್ಯಕ್ಷರಾಗಿ ಕಳೆದ 18 ವರ್ಷದಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಬ್ಯಾಂಕಿನ ಪರಿಶಿಷ್ಟ ಜಾತಿ/ಪಂಗಡ ಮೀಸಲು ನಿರ್ದೇಶಕ ಸ್ಥಾನದಿಂದ 2010 ರಿಂದ ಆಯ್ಕೆಯಾಗಿರುತ್ತಾರೆ. |
|||||||||||||||||||||||||
|
|
||||||||||||||||||||||||
'ಹಂದೆ ಹಾಲ್ ' ನ ಪಾಲುದಾರರು, 1991 ರಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಇವರು ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಜಯನಗರ ಘಟಕದ ಅಧ್ಯಕ್ಷರು. ಕೋಶಾಧ್ಯಕ್ಷರಾಗಿ ಅನುಭವ ಪಡೆದು ಹಣಕಾಸು ನಿರ್ವಹಣೆಯಲ್ಲಿ ಖ್ಯಾತಿ ಗಳಿಸಿದ್ದಾರೆ. ಹೋಟೆಲ್ ಉದ್ಯಮವೇ ಅಲ್ಲದೇ ರಾಜಕೀಯ ಕ್ಷೇತ್ರದಲ್ಲೂ ತಮ್ಮ ನಾಯಕತ್ವ ಪ್ರದರ್ಶಿಸಿದ್ದಾರೆ. ಯುವ ನೇತಾರನ ಎಲ್ಲ ಗುಣಗಳನ್ನು ಶ್ರೀಯುತರು ಮೈಗೂಡಿಸಿಕೊಂಡಿದ್ದಾರೆ. ಬ್ಯಾಂಕಿನ ನಿರ್ದೇಶಕರಾಗಿ 2010 ರಿಂದ ಆಯ್ಕೆಯಾಗಿರುತ್ತಾರೆ. |
|||||||||||||||||||||||||
|
|
||||||||||||||||||||||||
|
|||||||||||||||||||||||||
|
|
||||||||||||||||||||||||
1992ರಲ್ಲಿ ಕಿರಿಯ ಸಹಾಯಕರಾಗಿ ಸೇರ್ಪಡೆ. 1997 ರಲ್ಲಿ ಶಾಖಾ ವ್ಯವಸ್ಥಾಪಕರಾಗಿ ಪುನರ್ ನೇಮಕಾತಿಗೊಂಡು 2005 ರಲ್ಲಿ ಮುಖ್ಯ ಲೆಕ್ಕಧಿಕಾರಿಯಾಗಿ ಮುಂಬಡ್ತಿ ಹೊಂದಿರುತ್ತಾರೆ. 2001 ರಿಂದ ಕಾರ್ಯದರ್ಶಿಯವರ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 2009 ರಲ್ಲಿ ವೇತನ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿರುತ್ತಾರೆ. |
|||||||||||||||||||||||||
© 2014 The Hotel Industrialist's Co-Operative Bank Ltd., All Rights Reserved
The Hotel Industrialist's Co-Operative Bank Ltd., also known as Hotel Bank.
Powered By : EMS WEBTECH PVT.LTD.,