ಸದಸ್ಯರ ಆರೋಗ್ಯ ನಿಧಿ ಯೋಜನೆ:

ಈ ಯೋಜನೆಯನ್ನು ಅಕ್ಟೋಬರ್ 2002 ರಿಂದ ಪ್ರಾರಂಭಿಸಲಾಗಿದ್ದು, ಈ ಕೆಳಕಂಡ ಖಾಯಿಲೆಗಳಿಗೆ ನಿರ್ದೇಶಕ ಮಂಡಳಿಯು ಗರಿಷ್ಠ ರೂ. 35,000/- ದವರೆಗೆ ಮಂಜೂರು ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಯಾವುದೇ ಅರ್ಜಿಯನ್ನು ಪರಿಶೀಲಿಸಿ, ನಿರಾಕರಿಸುವ ಅಧಿಕಾರವು ನಿರ್ದೇಶಕ ಮಂಡಳಿಯದ್ದಾಗಿರುತ್ತದೆ. ನಿರಾಕರಿಸುವ ಬಗ್ಗೆ ಯಾ ಪುರಸ್ಕ್ರತಗೊಂಡ ಬಗ್ಗೆ ಯಾವುದೇ ಲಿಖಿತ ಹೇಳಿಕೆಗಳನ್ನು ನೀಡಲಾಗುವುದಿಲ್ಲ. ಫಲಾನುಭಾವಿಗಳಾಗ ಬಯಸುವ ಸದಸ್ಯರ ಅರ್ಥಿಕ ಪರಿಸ್ಥಿತಿಯನ್ನು ಸಹ ಈ ಸಂದರ್ಭದಲ್ಲಿ ಪರಿಶೀಲಿಸಿ ತೀರ್ಮಾನಿಸಲಾಗುವುದು.

ಸದಸ್ಯರು ವೈದ್ಯಕೀಯ ಚಿಕಿತ್ಸೆ ಪಡೆದು ಗುಣಮುಖರಾದ ಆರು ತಿಂಗಳೊಳಗೆ ವೈದ್ಯರ ದೃಢೀಕರಣ ಪತ್ರದೊಂದಿಗೆ ಬಿಡುಗಡೆ ಪತ್ರ (ಡಿಸ್ ಚಾರ್ಜ್ ಸರ್ಟಿಫಿಕೇಟ್ ) ಮತ್ತು ಬಿಲ್ಲುಗಳ ಅಸಲು ಪ್ರತಿಗಳನ್ನು ನೀಡಿ, ಸದಸ್ಯರೇ ಖುದ್ದಾಗಿ ಬಂದು ಪಡೆಯಬೇಕಾಗಿರುತ್ತದೆ. ಒಬ್ಬ ಸದಸ್ಯನು ತಮ್ಮ ಜೀವಿತಕಾಲದಲ್ಲಿ ಎರಡು ಬಾರಿ ಮಾತ್ರ ಈ ಯೋಜನೆಯ ಉಪಯೋಗ ಪಡೆಯಬಹುದಾಗಿದೆ. ಮಧ್ಯಂತರ ಅವಧಿಯು ಮೂರು ವರ್ಷಗಳಾಗಿರತಕ್ಕದ್ದು. ಸದಸ್ಯರ ವಾರಸುದಾರರಿಗಾಗಲೀ, ಅಥವಾ ಸದಸ್ಯರುಗಳಿಂದ ಅಧಿಕೃತ ಪತ್ರಗಳನ್ನು ಹೊಂದಿದವರಿಗಾಗಲೀ ಈ ಮೊಬಲಗನ್ನು ನೀಡಲಾಗುವುದಿಲ್ಲ. ಚಿಕಿತ್ಸೆ ಪಡೆದ ಸದಸ್ಯರು ಆ ಸಂದರ್ಭದಲ್ಲಿ ಮೃತಪಟ್ಟವರಿಗೆ ಅನ್ವಯಿಸುವುದಿಲ್ಲ. ಚಿಕಿತ್ಸೆಗಳನ್ನು ಪಡೆದ ಸದಸ್ಯರ ಹೊಣೆಗಾರಿಕೆಯು ಬಾಕಿಯಿದ್ದಲ್ಲಿ ಈ ಯೋಜನೆಯ ಮೊಬಲಗನ್ನು ಕೊಡಲಾಗುವುದಿಲ್ಲ. ಆದರೂ ವಿಶೇಷ ಸಂದರ್ಭಗಳಲ್ಲಿ ಮಾನವೀಯತೆ ದೃಷ್ಟಿಯಿಂದ ಸಾಲಕ್ಕೆ ಸರಿತೂಗಿಸಿಕೊಳ್ಳುವ ಅಥವಾ ನೀಡುವ ಅಧಿಕಾರವು ಆಡಳಿತ ಮಂಡಳಿಗೆ ಇರುತ್ತದೆ.

ಕ್ರ.ಸಂ. ಚಿಕಿತ್ಸೆಗಳ ವಿವರ ಗರಿಷ್ಠ ಮೊತ್ತ
1 ತೆರೆದ ಹೃದಯ ಚಿಕಿತ್ಸೆ 35,000/-
2 ಕಾನ್ಸರ್ ಶಸ್ತ್ರ ಚಿಕಿತ್ಸೆ 35,000/-
3 ಕೃತಕ ಮೂತ್ರಪಿಂಡ ಜೋಡಣೆ 35,000/-
4 ಕಾಲಿನ ಮಂಡಿಯ ಚಿಪ್ಪಿನ ಬದಲಾವಣೆ (Joint Replacement) 35,000/-
5 ಮೂತ್ರದ್ವಾರ ಮುಚ್ಚಿರುವುದನ್ನು ಬಿಡಿಸುವ ಬಗ್ಗೆ ಶಸ್ತ್ರ ಚಿಕಿತ್ಸೆ 10,000/-
6 ಗರ್ಭಕೋಶ ತೆಗೆಯುವ ಶಸ್ತ್ರ ಚಿಕಿತ್ಸೆ 10,000/-

ಸದಸ್ಯರ ಆರೋಗ್ಯ ನಿಧಿ ಯೋಜನೆಯ ವಿನಿಯೋಗದ ವಿವರ:


ಕ್ರ.ಸಂ. ವಿತ್ತೀಯ ವರ್ಷ ಸದಸ್ಯರ ಸಂಖ್ಯೆ ನೀಡಲಾದ ಮೊತ್ತ
1 2022-2023 4 25,000/-
2 2021-2022 12 1,23,000/-
3 2020-2021 6 45,000/-
4 2019-2020 10 75,000/-
5 2018-2019 14 84,000/-
6 2017-2018 13 1,18,000/-
7 2016-2017 14 1,25,000/-
8 2015-2016 09 1,20,000/-
9 2014-2015 06 60,000/-
10 2013-2014 10 85,000/-
11 2012-2013 10 1,00,000/-
12 2011-2012 16 1,25,000/-
13 2010-2011 13 1,12,000/-
14 2009-2010 10 83,000/-
15 2008-2009 20 1,26,000/-
16 2007-2008 20 1,01,000/-
17 2006-2007 11 1,29,000/-
18 2005-2006 10 95,000/-
19 2004-2005 15 1,25,000/-
20 2003-2004 05 45,000/-
21 2002-2003 01 10,000/-