ಪ್ರತಿಭಾ ಪುರಸ್ಕಾರ ಯೋಜನೆ:

ಈ ಯೋಜನೆಯನ್ನು 1993 ರಿಂದ ಬ್ಯಾಂಕಿನ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಪ್ರಾರಂಭಿಸಲಾಯಿತು. ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆಯಾದ "ಬೆಳ್ಳಿ ಬೆಳಕು" ಇದರಲ್ಲಿ ಪ್ರಕಟಿಸಲು ಜಾಹಿರಾತುಗಳನ್ನು ಪಡೆದಿದ್ದು, ಈ ಮೂಲಕ ಸಂಗ್ರಹವಾದ ಹಣದಲ್ಲಿ ಪ್ರಕಟಣಾ ವೆಚ್ಚ ಹೋಗಿ ಉಳಿದ ಮೊಬಲಗನ್ನು ಠೇವಣಿಯಾಗಿಟ್ಟು, ಬರುವ ಬಡ್ದಿಯಿಂದ ಆಯಾಯ ವರ್ಷಗಳಲ್ಲಿ ಬ್ಯಾಂಕಿನ ಸದಸ್ಯರುಗಳ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ತಲಾ ರೂ. 2,000/-ಗಳ ಪುರಸ್ಕಾರ ಹಾಗು ಅರ್ಹತಾ ಪತ್ರವನ್ನು ನೀಡಲಾಗುವುದು. ಈ ಪುರಸ್ಕಾರವನ್ನು ಪ್ರತಿ ವರ್ಷ ಸದಸ್ಯರುಗಳ ಮದುವೆಯಾಗದ ಪ್ರತಿಭಾವಂತ ಮಕ್ಕಳಿಗೆ ಮಾತ್ರ ನೀಡುಲಾಗುವುದು. ಇದನ್ನು ನಿರ್ದೇಶಕ ಮಂಡಳಿಯು ಕಾಲ ಕಾಲಕ್ಕೆ ನಿಗದಿಗೊಳಿಸುವ ಅರ್ಹ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿರಬೇಕು. ಪ್ರಸ್ತುತ ಸ್ಥಿತಿಯಲ್ಲಿ ಎಸ್. ಎಸ್. ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಮಕ್ಕಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಈ ಪುರಸ್ಕಾರಕ್ಕೆ ಸದಸ್ಯರುಗಳ ಯಾವುದೇ ಅರ್ಥಿಕ ವರಮಾನಗಳ ಕಟ್ಟುಪಾಡು, ಜಾತಿ, ಧರ್ಮಗಳ ಭೇಧವಿಲ್ಲ. ಈ ಪುರಸ್ಕಾರದ ಅರ್ಜಿ ನಮೂನೆ ಮತ್ತು ಶುಲ್ಕಗಳನ್ನು ನಿರ್ದೇಶಕ ಮಂಡಳಿಯು ಕಾಲ ಕಾಲಕ್ಕೆ ನಿಗದಿಗೊಳಿಸಿದಂತೆ ಮಾತ್ರ ಸ್ವೀಕರಿಸಲಾಗುವುದು. ಪುರಸ್ಕಾರಕ್ಕಾಗಿ ಬಂದ ಅರ್ಜಿಗಳ ಪರಿಶೀಲನೆ ಹಾಗೂ ಆಯ್ಕೆಗಳು ನಿರ್ದೇಶಕ ಮಂಡಳಿಯ ತೀರ್ಮಾನವೇ ಅಂತಿಮ, ಪುರಸ್ಕಾರವಾದ ಫಲಾನುಬಾವಿಗಳು ಖುದ್ದಾಗಿ ಪಡೆಯಬೇಕಾಗಿರುತ್ತದೆ, ಮಕ್ಕಳ ತಂದೆ ಅಥವ ತಾಯಿಯವರಿಗೆ ನೀಡಲಾಗುವುದಿಲ್ಲ . ಈ ಬಗ್ಗೆ ಸಾಮಾನ್ಯ ಸಭೆಗೆ ಮುಂಚಿತವಾಗಿ ಅರ್ಜಿಗಳನ್ನು ಪಡೆಯುವ ಸಲುವಾಗಿ ಪತ್ರಿಕಾ ಪ್ರಕಟನೆ ಹಾಗೂ ಎಲ್ಲಾ ಶಾಖೆಗಳ ಸೂಚನಾಫಲಕಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಯಸುವ ಮಕ್ಕಳ ತಂದೆ ಯಾ ತಾಯಂದಿರು ಒಂದು ವರ್ಷಕ್ಕೂ ಮುಂಚೆ ಸದಸ್ಯತ್ವವನ್ನು ಪಡೆದಿರಬೇಕಾಗಿರುತ್ತದೆ. ಇದಕ್ಕೆ ಇತರ ಮೂಲಗಳಿಂದಲೂ ನಿಧಿ ಸಂಗ್ರಹಿಸುವ ಅಧಿಕಾರವನ್ನು ಬ್ಯಾಂಕು ಹೊಂದಿದ್ದು, ದಾನಿಗಳು ನೀಡುವ ಹಣಕ್ಕೆ ಅಧಿಕೃತ ರಶೀದಿಯನ್ನು ಪಡೆಯಬಹುದಾಗಿರುತ್ತದೆ.


ಪ್ರತಿಭಾ ಪುರಸ್ಕಾರ ಯೋಜನೆಯ ಫಲಾನುಭವಿಗಳ ವಿವರ:

ಕ್ರ.ಸಂ. ಅವಧಿಯಲ್ಲಿ ಪದವಿ ಪಿಯುಸಿ ಎಸ್ಎಸ್ಎಲ್ ಸಿ 7ನೇ ತರಗತಿ ಒಟ್ಟು
1 2022-2023 - 44  38 - 82
2 2021-2022 - 51  41 - 92
3 2020-2021 - 32  31 - 63
4 2019-2020 - 54  40 - 94
5 2018-2019 - 42  43 - 85
6 2017-2018 - 56  46 - 102
7 2016-2017 - 35  62 - 97
8 2015-2016 - 37  52 - 89
3 2014-2015 - 43  42 - 85
10 2013-2014 - 52 50 - 102
11 2012-2013 - 35 52 - 87
12 2011-2012 - 40 54 - 94
13 2010-2011 - 32 62 - 94
14 2009-2010 - 30 51 - 81
15 2008-2009 - 40 46 - 86
16 2007-2008 - 39 45 - 84
17 2006-2007 - 26 51 - 77
18 2005-2006 - 23 41 - 64
19 2004-2005 - 23 43 - 66
20 2003-2004 - 23 38 - 61
21 2002-2003 - 22 24 29 75
22 2001-2002 - 17 40 19 76
23 2000-2001 - 13 33 29 75
24 1999-2000 - 15 32 28 75
25 1998-1999 - 15 29 27 71
26 1997-1998 - 14 20 19 53
27 1996-1997 - 10 16 15 41
28 1995-1996 03 11 14 - 28
29 1994-1995 03 06 08 - 17
30 1993-1994 02 07 08 - 17